top of page

ಭಾರತೀಯ ಶಿಕ್ಷಣ ಬೆಳೆದು ಬಂದ ದಾರಿ: History and Evolution of Indian Education: Gurukula to Digital Era

Mar 24
3 min read
History and Evolution of Indian Education: Gurukula to Digital Era
ಪೀಠಿಕೆ : History and Evolution of Indian Education: Gurukula to Digital Era

ಭಾರತವು ಅಗಾದ ಜ್ಞಾನ ಮತ್ತು ಸಂಸ್ಕೃತಿಯ ನೆಲೆಯಾಗಿದೆ. ಪ್ರಾಚೀನ ಕಾಲದಿಂದಲೇ ಭಾರತದಲ್ಲಿ ಶಿಕ್ಷಣಕ್ಕೆ ವಿಶೇಷ ಮಹತ್ವ ನೀಡಲಾಗುತ್ತಿತ್ತು. ಶಿಕ್ಷಣವು ಕೇವಲ ಜ್ಞಾನ ಪಡೆಯುವ ಸಾಧನವಲ್ಲ, ಅದು ವ್ಯಕ್ತಿತ್ವ ನಿರ್ಮಾಣ ಮತ್ತು ಸಮಾಜದ ಅಭಿವೃದ್ಧಿಗೆ ಆಧಾರವಾಗಿತ್ತು. ಭಾರತದ ಶಿಕ್ಷಣ ವ್ಯವಸ್ಥೆ ಕಾಲಕ್ರಮೇಣ ವಿವಿಧ ಹಂತಗಳನ್ನು ದಾಟುತ್ತಾ ಬೆಳೆಯುತ್ತ ಬಂದಿದೆ. ವೇದಕಾಲದಿಂದ ಪ್ರಾರಂಭಿಸಿ, ಮಧ್ಯಯುಗ, ಬ್ರಿಟಿಷ್ ಕಾಲ ಮತ್ತು ಸ್ವಾತಂತ್ರ್ಯಾನಂತರ ಕಾಲದವರೆಗೆ ಭಾರತೀಯ ಶಿಕ್ಷಣ ವ್ಯವಸ್ಥೆ ಅನೇಕ ಬದಲಾವಣೆಗಳನ್ನು ಅನುಭವಿಸಿದೆ.


ಪ್ರಾಚೀನ ಭಾರತದ ಶಿಕ್ಷಣ ವ್ಯವಸ್ಥೆ

ಪ್ರಾಚೀನ ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಅತ್ಯಂತ ಸುಸಂಘಟಿತವಾಗಿತ್ತು. ಶಿಕ್ಷಣವನ್ನು ಗುರುಕುಲ ಪದ್ಧತಿಯ ಮೂಲಕ ನೀಡಲಾಗುತ್ತಿತ್ತು.ಗುರುಕುಲ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಗುರುಗಳ ಮನೆಯಲ್ಲಿ ವಾಸಿಸಿ ಶಿಕ್ಷಣ ಪಡೆಯುತ್ತಿದ್ದರು. ಗುರು ಮತ್ತು ಶಿಷ್ಯರ ನಡುವೆ ಆಪ್ತ ಹಾಗು ಗೌರವಾನ್ವಿತ ಸಂಬಂಧವಿತ್ತು. ಶಿಸ್ತು ಮತ್ತು ನೈತಿಕ ಮೌಲ್ಯಗಳಿಗೆ ಹೆಚ್ಚು ಮಹತ್ವ ನೀಡಲಾಗಿತ್ತು. ಶಿಕ್ಷಣ ಸಂಪೂರ್ಣ ಉಚಿತವಾಗಿತ್ತು. ಜೀವನ ಕೌಶಲ್ಯಗಳನ್ನು ಕೂಡ ಕಲಿಸುತ್ತಿದ್ದರು.ವೇದಗಳು,ಉಪನಿಷತ್ತುಗಳು, ವ್ಯಾಕರಣ,ಗಣಿತ,ಖಗೋಳಶಾಸ್ತ್ರ, ಆಯುರ್ವೇದ ಮುಂತಾದ ವಿಷಯಗಳನ್ನು ಬೋಧಿಸಲಾಗುತ್ತಿತ್ತು.ಈ ಕಾಲದಲ್ಲಿ ಶಿಕ್ಷಣದ ಮುಖ್ಯ ಉದ್ದೇಶ 'ಸಂಪೂರ್ಣ ವ್ಯಕ್ತಿತ್ವ ವಿಕಸನವೇ' ಆಗಿತ್ತು.


 ಪ್ರಸಿದ್ಧ ಪ್ರಾಚೀನ ವಿಶ್ವವಿದ್ಯಾಲಯಗಳು

ಪ್ರಾಚೀನ ಭಾರತದಲ್ಲಿ ಜಗತ್ತಿನ ಅತ್ಯಂತ ಪ್ರಸಿದ್ಧ ವಿದ್ಯಾಕೇಂದ್ರಗಳು ಇದ್ದವು. ಇಲ್ಲಿ ಶಿಕ್ಷಣವನ್ನ ಪಡೆಯಲು ವಿದೇಶದಿಂದಲೂ ಆಗಮಿಸುತ್ತಿದ್ದರು. ಅವುಗಳಲ್ಲಿ ಮುಖ್ಯವಾದವುಗಳೆಂದರೆ,

  •  ನಾಳಂದಾ ವಿಶ್ವವಿದ್ಯಾಲಯ

    • ನಾಳಂದಾ ವಿಶ್ವವಿದ್ಯಾಲಯವು ಪ್ರಾಚೀನ ಭಾರತದ ಅತ್ಯಂತ ಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು. ಇಲ್ಲಿ ದೇಶ-ವಿದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದರು.ಇಲ್ಲಿ ಸುಮಾರು 10,000 ವಿದ್ಯಾರ್ಥಿಗಳು, 2,000 ಕ್ಕಿಂತ ಹೆಚ್ಚು ಶಿಕ್ಷಕರು, ದೊಡ್ಡ ಗ್ರಂಥಾಲಯ, ವಿವಿಧ ವಿಷಯಗಳ ಅಧ್ಯಯನತೆಯೊಂದಿಗೆ ಪ್ರಸಿದ್ಧ ವಿದ್ಯಾ ಕೇಂದ್ರವಾಗಿತ್ತು.

  • ತಕ್ಷಶಿಲಾ ವಿಶ್ವವಿದ್ಯಾಲಯ

    • ತಕ್ಷಶಿಲಾ ವಿಶ್ವವಿದ್ಯಾಲಯವೂ ಅತ್ಯಂತ ಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು. ಇಲ್ಲಿ, ವೈದ್ಯಕೀಯ, ರಾಜಕೀಯ, ಯುದ್ಧಕಲೆ, ತತ್ವಶಾಸ್ತ್ರ ಮುಂತಾದ ವಿಷಯಗಳನ್ನು ಬೋಧಿಸಲಾಗುತ್ತಿತ್ತು.ಈ ವಿಶ್ವವಿದ್ಯಾಲಯಗಳು ಭಾರತವನ್ನು ಜಗತ್ತಿನ ಜ್ಞಾನ ಕೇಂದ್ರವನ್ನಾಗಿ ಮಾಡಿದ್ದವು.


 ಮಧ್ಯಯುಗದ ಶಿಕ್ಷಣ ವ್ಯವಸ್ಥೆ

ಮಧ್ಯಯುಗದಲ್ಲಿ ಭಾರತದಲ್ಲಿ ಮುಸ್ಲಿಂ ಆಡಳಿತ ಆರಂಭವಾಯಿತು. ಈ ಕಾಲದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳು ಕಂಡುಬಂದವು.ಈ ಕಾಲದಲ್ಲಿ ಮುಖ್ಯವಾಗಿ ಎರಡು ವಿಧದ ಶಿಕ್ಷಣ ಸಂಸ್ಥೆಗಳು ಇದ್ದವು. ಅವುಗಳೆಂದರೆ, ಮಕ್ತಬ್ ಮತ್ತು ಮದರಸಾ ಮಕ್ತಬ್‌ಗಳಲ್ಲಿ ಪ್ರಾಥಮಿಕ ಶಿಕ್ಷಣ ನೀಡಲಾಗುತ್ತಿತ್ತು.ಮದರಸಾಗಳಲ್ಲಿ ಉನ್ನತ ಶಿಕ್ಷಣ ನೀಡಲಾಗುತ್ತಿತ್ತು.ಅರೇಬಿಕ್ ಭಾಷೆ, ಪರ್ಷಿಯನ್ ಭಾಷೆ, ಇಸ್ಲಾಮಿಕ್ ಧರ್ಮಶಾಸ್ತ್ರ,ಗಣಿತ ಮುಂತಾದ ವಿಷಯಗಳನ್ನು ಕಲಿಸುತ್ತಿದ್ದರು.ಈ ಕಾಲದಲ್ಲಿ ಧಾರ್ಮಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿತ್ತು.


ಬ್ರಿಟಿಷ್ ಕಾಲದ ಶಿಕ್ಷಣ ವ್ಯವಸ್ಥೆ

ಬ್ರಿಟಿಷರ ಆಡಳಿತದಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಿದವು.

ಬ್ರಿಟಿಷರು ಪಾಶ್ಚಾತ್ಯ ಶಿಕ್ಷಣವನ್ನು ಭಾರತದಲ್ಲಿ ಪರಿಚಯಿಸಿದರು.1835ರಲ್ಲಿ ಮೆಕಾಲೆ ಎಂಬ ಅಧಿಕಾರಿ ಹೊಸ ಶಿಕ್ಷಣ ನೀತಿಯನ್ನು ಪರಿಚಯಿಸಿದರು.ಈ ನೀತಿಯ ಉದ್ದೇಶ ಇಂಗ್ಲಿಷ್ ಶಿಕ್ಷಣವನ್ನು ಪ್ರೋತ್ಸಾಹಿಸುವುದು, ಬ್ರಿಟಿಷ್ ಆಡಳಿತಕ್ಕೆ ಸಹಾಯ ಮಾಡುವ ಅಧಿಕಾರಿಗಳನ್ನು ತಯಾರಿಸುವುದಾಗಿತ್ತು.ಈ ಕಾಲದಲ್ಲಿ ಅನೇಕ ಶಾಲೆಗಳು ಮತ್ತು ಕಾಲೇಜುಗಳು ಆರಂಭವಾದವು. ಕಲ್ಕತ್ತಾ ವಿಶ್ವವಿದ್ಯಾಲಯ, ಮುಂಬೈ ವಿಶ್ವವಿದ್ಯಾಲಯ, ಮದ್ರಾಸ್ ವಿಶ್ವವಿದ್ಯಾಲಯಗಳು 1857ರಲ್ಲಿ ಸ್ಥಾಪಿಸಲ್ಪಟ್ಟವು.


ಸ್ವಾತಂತ್ರ್ಯ ಚಳವಳಿಯ ಸಮಯದ ಶಿಕ್ಷಣ

ಭಾರತದ ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಅನೇಕ ನಾಯಕರು ಶಿಕ್ಷಣದ ಮಹತ್ವವನ್ನು ಒತ್ತಿಹೇಳಿದರು.ಮಹಾತ್ಮ ಗಾಂಧೀಜಿಯವರು ಮೂಲ ಶಿಕ್ಷಣ (Basic Education) ಎಂಬ ತತ್ವವನ್ನು ಪರಿಚಯಿಸಿದರು.ಈ ಶಿಕ್ಷಣದ ಉದ್ದೇಶ:

  • ಕೈಕೆಲಸದ ಮಹತ್ವ

  • ಸ್ವಾವಲಂಬನೆ

  • ನೈತಿಕ ಮೌಲ್ಯಗಳು ಮುಂತಾದವುಗಳನ್ನು ಬೆಳೆಸುವುದೇ ಆಗಿತ್ತು.

ರವೀಂದ್ರನಾಥ ಟಾಗೋರ್ ಅವರು ಶಾಂತಿನಿಕೇತನವನ್ನು ಸ್ಥಾಪಿಸಿದರು. ಇದರ ಮೂಲಕ ತಮ್ಮದೇ ಆದ ಶೈಕ್ಷಣಿಕ ತತ್ವಗಳನ್ನು ಪ್ರಚುರಪಡಿಸಿದರು. ಅವರ ಶಿಕ್ಷಣ ಮೂಲ ತತ್ವಗಳೆಂದರೆ :

  • ಪ್ರಕೃತಿಯ ಮಧ್ಯೆ ಶಿಕ್ಷಣ

  • ಸೃಜನಶೀಲತೆ

  • ಸ್ವತಂತ್ರ ಚಿಂತನೆ ಮುಂತಾದವು.


ಸ್ವಾತಂತ್ರ್ಯಾನಂತರ ಭಾರತದ ಶಿಕ್ಷಣ ವ್ಯವಸ್ಥೆ

1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ಮಾಡಲಾಯಿತು. ರಾಧಾಕೃಷ್ಣನ್ ಆಯೋಗ, ಕೋಠಾರಿ ಆಯೋಗ ಮುಂತಾದ ಆಯೋಗಗಳನ್ನು ರಚಿಸಲಾಯಿತು.ಕೋಠಾರಿ ಆಯೋಗವು 10+2+3 ಶಿಕ್ಷಣ ವ್ಯವಸ್ಥೆ, ಶಿಕ್ಷಣದ ಸಮಾನ ಅವಕಾಶ, ವಿಜ್ಞಾನ ಶಿಕ್ಷಣದ ಉತ್ತೇಜನ ಮುಂತಾದ ಶಿಫಾರಸ್ಸುಗಳನ್ನು ಮಾಡಿತು.


ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆ

ಇಂದಿನ ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಬಹಳಷ್ಟು ಅಭಿವೃದ್ಧಿ ಹೊಂದಿದೆ. ಪಾಶ್ಚಾತ್ಯ ಶಿಕ್ಷಣದ ಮಿಳಿತದೊಂದಿಗೆ ಸಾಂಸ್ಕೃತಿಕವಾಗಿ ಹಾಗೂ ವೈಜ್ಞಾನಿಕವಾಗಿ ಅತ್ಯುನ್ನತ ಪ್ರಗತಿಯನ್ನು ಹೊಂದಿದೆ. ಆಧುನಿಕ ಭಾರತ ಶಿಕ್ಷಣ ವ್ಯವಸ್ಥೆಯ ಪ್ರಮುಖ ಲಕ್ಷಣಗಳೆಂದರೆ,

  • ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ

  • ತಂತ್ರಜ್ಞಾನ ಆಧಾರಿತ ಶಿಕ್ಷಣ

  • ಆನ್‌ಲೈನ್ ಶಿಕ್ಷಣ, ಮುಂತಾದವು. ಇವುಗಳ ಅನುಷ್ಠಾನಕ್ಕಾಗಿ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿವೆ. ಅವುಗಳಲ್ಲಿ ಮುಖ್ಯವಾದ ಗಳೆಂದರೆ,

    • ಸರ್ವ ಶಿಕ್ಷಣ ಅಭಿಯಾನ

    • ಮಧ್ಯಾಹ್ನ ಊಟ ಯೋಜನೆ

    • ಡಿಜಿಟಲ್ ಶಿಕ್ಷಣ


ಶಿಕ್ಷಣದ ಮಹತ್ವ 

ಶಿಕ್ಷಣವು ವ್ಯಕ್ತಿಯ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಶಿಕ್ಷಣದ ಪ್ರಯೋಜನಗಳನ್ನು ಈ ಕೆಳಕಂಡಂತೆ ಪಟ್ಟಿ ಮಾಡಬಹುದಾಗಿದೆ.

  • ಜ್ಞಾನ ಹೆಚ್ಚಿಸುತ್ತದೆ

  • ವ್ಯಕ್ತಿತ್ವ ಅಭಿವೃದ್ಧಿ

  • ಉತ್ತಮ ಉದ್ಯೋಗ ಅವಕಾಶ

  • ಸಮಾಜದ ಅಭಿವೃದ್ಧಿ ಹೀಗೆ ಹತ್ತು ಹಲವು ಪ್ರಯೋಜನಗಳನ್ನು ತಿಳಿಯಬಹುದು.

ಶಿಕ್ಷಣವಿಲ್ಲದೆ ಯಾವುದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವುದು ಅನಿವಾರ್ಯವಾಗಿದೆ.

 

ಭಾರತೀಯ ಶಿಕ್ಷಣ ವ್ಯವಸ್ಥೆಯ ಸವಾಲುಗಳು

ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಇಂದಿಗೂ ಕೆಲವು ಸಮಸ್ಯೆಗಳು ಇವೆ. ಅವುಗಳಲ್ಲಿ ಪ್ರಮುಖ ಸಮಸ್ಯೆಗಳೆಂದರೆ,

  • ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳ ಕೊರತೆ

  • ಶಿಕ್ಷಕರ ಕೊರತೆ

  • ದಾರಿದ್ರ್ಯ

  • ಶಿಕ್ಷಣದ ಅಸಮಾನತೆ

ಈ ಸಮಸ್ಯೆಗಳನ್ನು ಪರಿಹರಿಸುವುದು ಅತ್ಯಂತ ಅಗತ್ಯವಾಗಿದೆ.


ಉಪಸಂಹಾರ

 ಭಾರತೀಯ ಶಿಕ್ಷಣ ವ್ಯವಸ್ಥೆ ಪ್ರಾಚೀನ ಕಾಲದಿಂದ ಇಂದಿನವರೆಗೂ ಅನೇಕ ಬದಲಾವಣೆಗಳನ್ನು ಕಂಡಿದೆ. ಗುರುಕುಲ ಪದ್ಧತಿಯಿಂದ ಪ್ರಾರಂಭಿಸಿ ಆಧುನಿಕ ಡಿಜಿಟಲ್ ಶಿಕ್ಷಣದವರೆಗೆ ಭಾರತ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಪ್ರಗತಿ ಸಾಧಿಸಿದೆ.ಶಿಕ್ಷಣವು ವ್ಯಕ್ತಿಯ ಜೀವನವನ್ನು ಮಾತ್ರವಲ್ಲದೆ ದೇಶದ ಭವಿಷ್ಯವನ್ನೂ ರೂಪಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಉತ್ತಮ ಶಿಕ್ಷಣದ ಮೂಲಕವೇ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಾಧ್ಯ.



ಈ ಲೇಖನವು ನಿಮಗೆ ಉಪಯುಕ್ತವೆನಿಸಿದರೆ, ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ. ನೀವು ಇದೇ ರೀತಿಯ ಗುಣಮಟ್ಟದ ಲೇಖನಗಳು, ಶೈಕ್ಷಣಿಕ ಪ್ರಬಂಧಗಳು ಅಥವಾ ವೃತ್ತಿಪರ ವಿಷಯ ಬರವಣಿಗೆಯ (Content Writing) ಸೇವೆಗಳನ್ನು ಹುಡುಕುತ್ತಿದ್ದರೆ, ನಮ್ಮ ಫ್ರೀಲ್ಯಾನ್ಸಿಂಗ್ ಸೇವೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ಮತ್ತು ನಮ್ಮೊಂದಿಗೆ ಕೆಲಸ ಮಾಡಲು ಇಲ್ಲಿ ಭೇಟಿ ನೀಡಿ: Vidyadeevige Services.


If you found this article helpful, please share your thoughts. If you are looking for high-quality articles, educational essays, or professional content writing services, we can assist you. To learn more about our freelancing services and to collaborate with us, please get in touch: Vidyadeevige Services.


Comments


bottom of page